ಅಷ್ಟ ಮದಗಳು ಮನುಷ್ಯನ ಸ್ವಬಾವದಲ್ಲೇ ಅಂತರ್ಗತವಾಗಿರುತ್ತವೆ. ಇವೆಲ್ಲವೂ ಒಬ್ಬ ವ್ಯಕ್ತಿಯಲ್ಲಿದ್ದಾಗ ಆತ ತುಂಬಿದ ಕೊಡದಂತೆ ಪ್ರಶಾಂತವಾಗಿರಬೇಕು. ಆದರೆ ಒಬ್ಬ ಮನುಷ್ಯ ಹಾಳಾಗಲು ಅಷ್ಟ ಮದಗಳು ಕಾರಣ ಎಂದು ಹಿರಿಯರು ಹೇಳುತ್ತಾರೆ. ಅವೆಂದರೆ: ಧನ - ಸಂಪತ್ತು ಕುಲ - ವಂಶ ವಿದ್ಯೆ - ಶಿಕ್ಷಣ ರೂಪ - ಸೌಂದರ್ಯ ಯೌವನ - ಪ್ರಾಯ ಬಲ - ಶಕ್ತಿ ಪರಿವಾರ - ಕುಟುಂಬ ಅಧಿಕಾರ - ನಾಯಕತ್ವ ಇವುಗಳಲ್ಲಿ ಕೆಲವಿದ್ದರೂ ಅಹಂಕಾರ ಬರುವ ಸಂಭವವುಂಟು. ಮನುಷ್ಯ ಈ ಅಷ್ಟ ಮದಗಳನ್ನು ಬಿಟ್ಟರೆ ಬದುಕನ್ನು ಸುಂದರವಾಗಿಸಿಕೊಳ್ಳಬಹುದು ಎನ್ನುತ್ತಾರೆ ಬಲ್ಲವರು.